ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡಿದ್ದೀರಾ? ಇದೋ ನೋಡಿ ಅದರ ಪರಿಣಾಮ!

ನೀವು ಗರ್ಭಿಣಿಯಾಗಲು ಇಷ್ಟಪಡುವುದಿಲ್ಲ ಅನ್ನುವುದನ್ನು ಬಿಟ್ಟರೆ,  'ಮುಟ್ಟು' ಎಂದೂ ಸಂತೋಷದಾಯಕವಲ್ಲ.  ಯಾವ ಮಹಿಳೆಗೆ ಕೇಳಿದರೂ, ಮುಟ್ಟಿನ ನೋವನ್ನು ಆಕೆ ಎಷ್ಟು ದ್ವೇಷಿಸುತ್ತಾಳೆ ಎಂದು ಹೇಳಿಯಾಳು.  ಆದರೂ ಎಲ್ಲ ಮಹಿಳೆಯರು ಈ ಸಮಯದಲ್ಲಿ ಆನಂದಿಸುವ ಒಂದು ವಿಷಯವಿದೆ.  ಆದರೆ ಅದರ ಬಗ್ಗೆ ಅವರು ಮಾತನಾಡುವುದಿಲ್ಲ.  'ಸಂಭೋಗ'! ಹೌದು, ಅದು ಎಷ್ಟೇ ಅಸಭ್ಯ ಅಥವಾ ಕೊಳಕಾಗಿದ್ದರೂ ಮುಟ್ಟಿನ ಸಮಯದ ಸಂಭೋಗ ಆನಂದದಾಯಕ ವಾಗಿರುತ್ತದೆ.

ಡಾಕ್ಟರರೂ ಸಹಿತ ಮುಟ್ಟಿನ ಸಮಯದ ಸಂಭೋಗ ಒಳ್ಳೇಯದು ಮತ್ತು ಅತ್ಯಂತ ಸುರಕ್ಷಿತ ವಾದದ್ದೆಂದು ಖಚಿತ ಪಡಿಸಿದ್ದಾರೆ.  ಆದ್ದರಿಂದ ಕೆಳಗಿನಿಂದ ರಕ್ತಸ್ರಾವ ಆಗುವಾಗ ನೀವು ಏಕೆ ತುಂಟತನ ಮಾಡಲೇಬೇಕು ಎನ್ನುವ ಬಗ್ಗೆ ಈ ಕೆಳಗಿನ 10  ಕಾರಣಗಳಿವೆ.

1. ಇದು ಮುಟ್ಟಿನ ಸಮಯದ ಭಯಂಕರ ಸ್ನಾಯು ಸೆಳತದ ನೋವು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.  ಉದ್ರೇಕವಾದಾಗ ಬಿಡುಗಡೆಯಾಗುವ ಒಕ್ಸಿಟೊಸಿನ್, ನಿಮ್ಮ ಶಾರೀರಿಕ ಮತ್ತು ಮಾನಸಿಕ ಭಾವನೆಗಳನ್ನು ಮೇಲಕ್ಕೆತ್ತಿ ನಿಮ್ಮ ಗರ್ಭ ಕೋಶದ  ಮೇಲೆ  ಕುಳಿತ ವ್ಯಕ್ತಿಯ ಭಾರವನ್ನು ಮರೆಯಲು ಸಹಾಯ ಮಾಡುತ್ತದೆ.

2 . ಮುಟ್ಟು ಮತ್ತು ಅದರ ರಕ್ತ ಸ್ರಾವದ ಬಗ್ಗೆ, ನಿಮ್ಮ ಮತ್ತು  ನಿಮ್ಮ ಜೊತೆಗಾರನಿಗಿದ್ದ ಕೆಟ್ಟ ಭಾವನೆ ಹೋಗಲಾಡಿಸಲು ಮುಟ್ಟಿನ ಸಮಯದ ಸಂಭೋಗ ಸಹಾಯ ಮಾಡುತ್ತದೆ.

3 .  ಮುಟ್ಟಿನ  ಸಮಯದಲ್ಲಿಯೇ ನೀವು ಹೆಚ್ಚಿನ ಲೈಂಗಿಕ ಆಕರ್ಷಣೆಗೆ ಮತ್ತು ಇದರ ಪ್ರಚೋದನೆಗೆ ಒಳಗಾಗುತ್ತೀರಿ.  ಹೀಗಾಗಿ ಈ ಕ್ರಿಯೆಯಲ್ಲಿ ನಿಮಗೆ ಅತೀವ ಆನಂದ ಆಗುವುದಂತೂ ಖಂಡಿತ.

4 .  ನಿಮ್ಮ ಜೊತೆಗಾರ ನಿಮ್ಮ ಶರೀರದ ಒಳಗೆ ಸ್ವಲ್ಪ ಸುರಿದರೂ ನೀವು ಚಿಂತಿಸಬೇಕಿಲ್ಲ.  ಏಕೆಂದರೆ ಇದರಿಂದ ನೀವು ಗರ್ಭಿಣಿ ಯಾಗುವ ಸಾಧ್ಯತೆ ತೀರಾ ವಿರಳ.

5 .  ಇದು ಅಷ್ಟೇನೂ ರಕ್ತಮಯವಲ್ಲ.  ಮಹಿಳೆ ಮುಟ್ಟಿನ ಸಮಯದಲ್ಲಿ ಸರಾಸರಿ ಸುಮಾರು 30 - 40 ml ರಕ್ತ ಸ್ರವಿಸುತ್ತಾಳೆ. ಹೀಗಾಗಿ ಪ್ರತಿ ತಿಂಗಳು ನಾವು 3 - 4 ದಿವಸ ರಕ್ತ ಸ್ರಾವ ಮಾಡುತ್ತೇವೆ.

6 .  ಆ ಹೆಚ್ಚಿನ ಲುಬ್ರಿಕೆಶನ್ ಗೆ ವಿದಾಯ ಹೇಳಿ.  ಮುಟ್ಟಿನ ಸಮಯದಲ್ಲಿ ನಿಮ್ಮ ಸ್ತ್ರೀ ಜನಾಂಗಗಳನ್ನು ಒದ್ದೆಯಾಗಿಡಲು ನಿಮ್ಮ ಶರೀರವು ಸಾಕಷ್ಟು ದ್ರವವನ್ನು ಉತ್ಪಾದಿಸುತ್ತದೆ.  ಹೀಗಾಗಿ ನೀವು ಈ ಕ್ರಿಯೆಯನ್ನು ನಿರಾಂತಕವಾಗಿ ಮಾಡಬಹುದು.

7 .  ಸಂಶೋಧನೆಗಳ  ಪ್ರಕಾರ, ಮುಟ್ಟಿನ ಸಮಯದ ಸಂಭೋಗ, ನಿಮ್ಮ ಉದ್ರಿಕ್ತ ರೂಪವನ್ನು ವ್ಯಕ್ತ ಮಾಡಲು ಸಹಾಯ ಮಾಡುತ್ತದೆ.  ಮತ್ತು ಇದರ ಅರ್ಥವೇನೆಂದರೆ ದೀರ್ಘ ಸಮಯ ಮತ್ತು ಹೆಚ್ಚಿನ ಆನಂದ!  ಇದರ ಜೊತೆಗೆ ನೀವು ನಿಮ್ಮ ಜೊತೆಗಾರನ ಅಭಿಮಾನವನ್ನು ಹೆಚ್ಚಿಸಿದ ಹಾಗೆ ಆಗುತ್ತದೆ.

8 .  ಎಲ್ಲರೂ ಇದನ್ನು ಇಷ್ಟಪಡುತ್ತಾರೆ!  ಯಾರೂ ಈ ಬಗ್ಗೆ ಮಾತನಾಡುವುದಿಲ್ಲ, ಆದರೆ ಯಾವುದೇ ಮಹಿಳೆಯನ್ನು ಕೇಳಿದರೂ, ಮುಟ್ಟಿನ ಸಮಯದ ಸಂಭೋಗದಲ್ಲಿ ಭಾಗಿಯಾಗುವುದನ್ನು ಅವಳು ಬಹಳ ಇಷ್ಟಪಡುತ್ತಾಳೆ ಎಂಬುದನ್ನು ಯಾವುದೇ ಸಂಕೋಚವಿಲ್ಲದೇ ಒಪ್ಪುತ್ತಾಳೆ.  ಆ ರಕ್ತ ನಿಮಗೆ ಸ್ವಲ್ಪ ಕೊಳಕು ಎನಿಸಿದರೂ, ನಂತರ ನೀವು ಎಲ್ಲವನ್ನೂ ಸ್ವಚ್ಛ ಮಾಡಬಹುದು.

9 .  ಮುಟ್ಟಿನ ಸಮಯದಲ್ಲಿ ನಿಮ್ಮ ಫುಡ್ ಕ್ರೇವಿಂಗ್ಸ್ ಜಾಸ್ತಿಯಾಗುತ್ತದೆ.  ಚಾಕಲೇಟ್ ಬಾರನ್ನು ಹಿಡಿದು ಕೊಳ್ಳುವ ಬದಲು ನಿಮ್ಮ ಜೊತೆಗಾರನ ಮೇಲಿಷ್ಟು ಸುರಿದು ಹೊದಿಕೆಯೊಳಗೆ ತುಂಟರಾಗಿರಿ.

10 . ಮತ್ತು ಕೊನೇಯದಾಗಿ, ನಿಮ್ಮ ಜೊತೆಗಾರನೊಡನೆ ನಿಮ್ಮ ಸಂಬಂಧ ಬೆಳೆಯಲು ಈ ಮುಟ್ಟಿನ ಸಮಯದ ಸಂಭೋಗ ಸಹಾಯ ಮಾಡುತ್ತದೆ.  ಎಲ್ಲಕ್ಕಿಂತ ಮಿಗಿಲಾಗಿ ಆತನಿಗೆ ನಿಮ್ಮ ಶರೀರದ ಪರಿಚಯ ಚೆನ್ನಾಗಿ ಆಗುತ್ತದೆ ಮತ್ತು ನಿಮ್ಮ ಮನೋಭಾವದ ಏರಿಳಿತಗಳೂ ಸರಿಯಾಗಿ ಅರ್ಥವಾಗುತ್ತದೆ.

Translated by Saroj R

loader